Friday, April 20, 2012

ಪ್ರೀತಿ


ಜೀವನ  ಒಂದು ಬಹು  ದೊಡ್ಡ  ಸಾಗರ 
ಅದರಲಿ ಅಡಗಿದೆ  ಪ್ರತಿಯೊಬ್ಬರ  ಪ್ರೇಮದ  ಆಗರ 

ಹೇಳಲಾರದೆ  ಕೇಳಲಾರದೆ  ಪಡುವ  ಮುಜುಗರ 
ತಂದಿದೆ  ಮನಸ್ಸಿಗೆ  ತೀರಲಾರದ  ಬೇಸರ 

ನೀನಾಗೇ  ವ್ಯಕ್ಥಪಡಿಸಬಾರದೇ ಪ್ರಿಯಕರ 
ನನಗಾಗುವುದು  ಆಗ  ಬಹು ದೊಡ್ಡ  ಸಡಗರ 

ನಡೆದು  ಬಿಡಲಿ  ಪ್ರೀತಿಯ  ಮಹಾ  ಸಮರ 
ಸಾರುವೆ  ಜಗಕೆ  ಈ   ನಮ್ಮ  ಪ್ರೀತಿಯ  ಸುಮಧುರ 

ನಿನ್ನ  ಬಾಹು   ಭಂಧನದಲ್ಲೊಮ್ಮೆ ಸಿಲುಕುವ  ಆಸೆ  ನನಗೆ  ಅಪಾರ 
ಪಾರಾಗುವ  ದಾರಿ  ಮರೆತು  ನಾ  ಸಾಗುವೆ  ನಿನ್ನ  ಜೊತೆ  ಬಹು  ದೂರ 

ಜೊತೆಗೂಡಿದ  ದಾರಿ  ತಲುಪಿದೆ  ಒಂದು  ಕಡಲ  ತೀರ 
ದಾರಿ  ಕಾಣದೆ  ಹೃದಯ   ಹೊರಡಿಸಿದೆ  ಮೂಕ  ಸ್ವರ 

ಪಯಣದ  ಕೊನೆ  ತಿಳಿಸದೆ  ಮರೆಯದೆಯಾ  ಚೋರ 
ನಿನ್ನ  ನೆನಪಿನ  ಅಂಗಳಕೆ  ಮರಳಿ  ನಾ  ಹೇಗೆ  ಬರಲಿ  ಧೀರ 

ಹಿಡಿ  ಪ್ರೀತಿಗಾಗಿ  ಹಂಬಲಿಸಿ  ಮನ  ಹೊರಡಿಸಿದೆ  ಅಪಸ್ವರ 
ಬಂದು  ಸಂತೈಸು  ಒಮ್ಮೆ  ನಮ್ಮ  ಪ್ರೀತಿಯಾಗಲಿ  ಅಜರಾಮರ 

ನೀನಿಲ್ಲದ  ಬದುಕು  ಹೊಳಪಿಲ್ಲದ  ಬಂಗಾರ 
ನೀ  ಬರದೆ  ಹೋದರೆ  ನಾನಾಗುವೆ  ಮಸಣದ  ದಾರಿಗೆ  ಬಲು  ಹತ್ತಿರ ...

ಮೊದಲ ನೋಟ


ನಿನ್ನ  ನೋಡಲು  ಹೊರಟ  ಆ  ದಿನದ  ದಿನಚರಿ
ಏನೆಂದು  ಹೇಳಲಿ  ಗೆಳೆಯ  ಆ  ಸೊಬಗಿನ  ಸಿರಿ

ಎಂದೂ  ಕಾಣದ ಕನಸ  ನಾ  ಕಂಡೆ  ಅಂದು
ನಾಚಿ  ನೀರಾಗಿ  ಮರೆತು  ಹೋದೆ  ನನ್ನ  ಇಂದು

ಗೆಳತಿಯರ  ಕೂಗು  ಬಡಿದೆಬ್ಬಿಸಿತು  ಬ್ರಮೆ ಇಂದ
ನಾನಾದೆ  ಗರ್ಭದಿಂದ   ಹೊರಬಂದ   ಹಸುಕಂದ

ನಿನ್ನ  ಕಾಣುವ  ತವಕ  ಹೆಚ್ಚಾಗಿ ,ಮನವು  ಹುಚ್ಚಾಗಿ
ನೀ  ಬರುವ   ದಾರಿಯಲಿ  ಕಾಯ್ದು  ನಿಂತೆ  ಶಬರಿಯಾಗಿ

ಕಾತುರದ ಕ್ಷಣಗಳು , ನಿಲ್ಲದ   ತವಕಗಳು
ಕೈ  ಬೀಸಿ  ಕರೆಯುತಿವೆ  ಸೀರೆಯ ನೆರಿಗೆಗಳು

ಬಂದೆಯಾ  ನೀನು  ಕೊಲ್ಮಿಂಚಿನಂತೆ  ಕಣ್ಣ  ಮುಂದೆ
ಏನು  ತೋಚದೆ  ಮಾತೆ  ಬರದೆ  ನಾ  ನಿನಗೆ  ಸೋತು  ಹೋದೆ

ಕಣ್ಣು  ಮಿಟುಕಿಸದೆ  ನೋಡಿದ  ನಿನ್ನ  ರೀತಿ
ಮನದಿ  ಮೂಡಿಸಿದೆ  ಏನೋ  ಹೊಸ  ಭೀತಿ

ಹೃದಯ   ಕುಣಿಯಿತು  ಪೂರ್ಣ  ಚಂದಿರನ  ಕಂಡಂತೆ
ಮನಸು  ಹರಿಯಿತು  ತುಂಬಿ  ಬಂದ  ಹೊಳೆಯಂತೆ

ಬರುವೆಯ   ಗೆಳೆಯ  ನನ್ನ  ಬಾಲ  ಪಯಣಕೆ  ನಾವಿಕನಾಗಿ
ನಡೆಸುವೆಯಾ ಬಾಳ  ರಥವ   ಪಾರ್ಥಸಾರಥಿಯಾಗಿ ...

ನೆನೆದ ಕ್ಷಣ


ಗೆಳೆಯ   ನಿನ್ನ  ನೆನೆದ  ಆ  ಕ್ಷಣ 
ಸಂತಸದಿ  ನಲಿಯಿತೆನ್ನ    ಮನ 

ನೆನೆದು  ನೆನೆದು  ನಾ  ಪಟ್ಟ  ಆ  ಖುಷಿ 
ಮನಸ್ಸಿನ   ಬಯಲು  ಆಯಿತು  ಹಸಿ 

ಪ್ರೇಮದ   ಸಸಿಯ   ನೆಡುವ   ಬಾ  ಗೆಳೆಯ 
ಇಳಿಸುವ   ಬಾರಾ  ಭಾವದ  ಹೊರೆಯ 

ಮರದ  ನೆರಳಲಿ  ಪ್ರೀತಿಯ  ಸವಿ  ಸವಿಯುವ 
ಲೋಕವ  ಮರೆತು  ನಾವಿಬ್ಬರು  ಜೊತೆ  ಸಾಗುವ 

ಇಬ್ಬನಿಯ  ತಂಪು   ನಿನ್ನ  ಎದೆಯ   ಇಂಪು 
ಸೇರಿ ಬೀರಿವೆ  ಮನದ  ಬಾಂದಳಕೆ  ಕಂಪು 

ಗೆಳೆಯ  ನಿನ್ನ  ಎದೆಯಲಿ  ಹುದುಗುವ  ಆಸೆ 
ತೀರಿಸುವೆಯ   ಈ  ನಿನ್ನ  ಹೃದಯದ  ಕೊನೆಯಾಸೆ 

ಪ್ರೀತಿಗೆ  ಹಾಕದೆ  ಇರು  ಯಾವುದೇ  ಬೇಲಿ 
ಜೊತೆಯಾಗಿ  ಸಾಗುವ  ಆ  ಒಲವಿನಲಿ  ತೇಲಿ 

ಅರ್ಥವಿಲ್ಲದ ಬದುಕು


ಬಣ್ಣದ   ಬದುಕಿನ   ಕಳೆಯ   ಹೊತ್ತು 
ಚಿತ್ರಗಳಿಗೆ  ರಂಗಿನ   ಮೆರುಗನ್ನು  ಕೊಟ್ಟು  
ಸಾಗುತಿಹೆವು  ಮುಂದೆ  ಅಪಾರ  ಕನಸುಗಳ   ರಾಶಿಯೆಲ್ಲಿ 
ನಿಸ್ವಾರ್ಥದ   ಬದುಕು  ಮುನ್ನುಗ್ಗುತಿದೆ  ಯಶಸ್ಸಿನ   ಅಮಲಿನಲ್ಲಿ 

ಸೂರ್ಯ   ಉದಯಿಸುವ   ಸಂಬ್ರಮ   ಕಾಣದಾದೆ 
ಹಕ್ಕಿಗಳ   ಕಲರವ   ಕೇಳದೆ   ಹೋದೆ 
ಬಾ  ಎಂದರೂ  ಬರದಿರುವ   ಪ್ರೀತಿಯ  ಬೆನ್ನಟ್ಟಿದೆ  
ಪ್ರೀತಿಯ   ಪಯಣದಲ್ಲಿ  ಮುನ್ನುಗ್ಗುವ   ಸಾಹಸಗಯ್ದೆ   

ಹುಟ್ಟು  ಮರೆತ   ಅಂಬಿಗಳು  ನಾನಾದೆ 
ದಾರಿ  ಮರೆತ  ಪಯನಿಗಳು  ನಾನಾದೆ 
ಬದುಕಿನ   ಸಾರ್ಥಕತೆಯ   ಅರಿಯದೆ  ಸೋತೆ 
ಬಿಸಿಲ್ಗುದುರೆಯ   ಬೆನ್ನತ್ತಿದ   ಅಮಾಯಕಿಯದೆ 

ಬೆನ್ನುಬಿಡದ   ಪ್ರೀತಿ  ಕಾಡುತಿದೆ  ರಕ್ಕಸನಂತೆ 
ಹೃದಯದ   ಬಯಲಲ್ಲಿ  ಹಬ್ಬಿದೆ  ಕಾಳ್ಗಿಚ್ಚಿನಂತೆ 
ನೀರಾಗಿ  ಹರಿದು  ಬಾರೆಯಾ ,  ಮಳೆಯಾಗಿ  ಭುವಿಗೆ  ಸುರಿವೆಯಾ 
ಅರ್ಥವಿಲ್ಲದ   ಜೀವನವ  ಕೊನೆಯಗಿಸುವೆಯಾ   ..?