Friday, April 20, 2012

ಮೊದಲ ನೋಟ


ನಿನ್ನ  ನೋಡಲು  ಹೊರಟ  ಆ  ದಿನದ  ದಿನಚರಿ
ಏನೆಂದು  ಹೇಳಲಿ  ಗೆಳೆಯ  ಆ  ಸೊಬಗಿನ  ಸಿರಿ

ಎಂದೂ  ಕಾಣದ ಕನಸ  ನಾ  ಕಂಡೆ  ಅಂದು
ನಾಚಿ  ನೀರಾಗಿ  ಮರೆತು  ಹೋದೆ  ನನ್ನ  ಇಂದು

ಗೆಳತಿಯರ  ಕೂಗು  ಬಡಿದೆಬ್ಬಿಸಿತು  ಬ್ರಮೆ ಇಂದ
ನಾನಾದೆ  ಗರ್ಭದಿಂದ   ಹೊರಬಂದ   ಹಸುಕಂದ

ನಿನ್ನ  ಕಾಣುವ  ತವಕ  ಹೆಚ್ಚಾಗಿ ,ಮನವು  ಹುಚ್ಚಾಗಿ
ನೀ  ಬರುವ   ದಾರಿಯಲಿ  ಕಾಯ್ದು  ನಿಂತೆ  ಶಬರಿಯಾಗಿ

ಕಾತುರದ ಕ್ಷಣಗಳು , ನಿಲ್ಲದ   ತವಕಗಳು
ಕೈ  ಬೀಸಿ  ಕರೆಯುತಿವೆ  ಸೀರೆಯ ನೆರಿಗೆಗಳು

ಬಂದೆಯಾ  ನೀನು  ಕೊಲ್ಮಿಂಚಿನಂತೆ  ಕಣ್ಣ  ಮುಂದೆ
ಏನು  ತೋಚದೆ  ಮಾತೆ  ಬರದೆ  ನಾ  ನಿನಗೆ  ಸೋತು  ಹೋದೆ

ಕಣ್ಣು  ಮಿಟುಕಿಸದೆ  ನೋಡಿದ  ನಿನ್ನ  ರೀತಿ
ಮನದಿ  ಮೂಡಿಸಿದೆ  ಏನೋ  ಹೊಸ  ಭೀತಿ

ಹೃದಯ   ಕುಣಿಯಿತು  ಪೂರ್ಣ  ಚಂದಿರನ  ಕಂಡಂತೆ
ಮನಸು  ಹರಿಯಿತು  ತುಂಬಿ  ಬಂದ  ಹೊಳೆಯಂತೆ

ಬರುವೆಯ   ಗೆಳೆಯ  ನನ್ನ  ಬಾಲ  ಪಯಣಕೆ  ನಾವಿಕನಾಗಿ
ನಡೆಸುವೆಯಾ ಬಾಳ  ರಥವ   ಪಾರ್ಥಸಾರಥಿಯಾಗಿ ...

No comments:

Post a Comment