Monday, August 27, 2012

ಕನಸುಗಳ ಸಿಂಚನ

ಶುರುವಾಗಿದೆ ನನ್ನಲಿ ಕನಸುಗಳ ಸಿಂಚನ 
ಪ್ರತಿ ಹನಿಗಳು ನೀಡುತಿವೆ ಮುದ್ದಾದ ಆಲಿಂಗನ
ಹೊಮ್ಮಿ ಬರುತಿದೆ ಪ್ರಣಯದ ಹೊಸತನ 
ವಿವರಿಸಲಾರೆ ನಾನು ಬಯಕೆಗಳ ಹುಚ್ಚುತನ

ಹೇಗೆ ಬಂದೆಯೋ ಅಂತರಾಳದಿ  ಧುಮುಕಿಬಿಟ್ಟೆ
ಮನಸಿನ ಆಳವ ಅರಿಯದೆ ಪ್ರೀತಿಯ ಕರುಣಿಸಿದೆ
ಸಾಗುವ ಕಡಲ ದಡದಲಿ ಎಂದು ಕೈಯಲ್ಲಿ ಕೈ ಇಟ್ಟೆ
ಕಂಪನದಿ ಮೂಡಿದ ಭಾವಗಳು ಹುಟ್ಟಿಸಿವೆ ಭಯದ ಅಲೆ

ಹೊಸತೊಂದು ಬಗೆಯ ಅನುಭವ ಕಾಡುತಿದೆ  
ಬೇಕೆಂಬ ಅರಿವಿಲ್ಲ ಬೇಡವೆಂಬ ಮಾತು ಬರುತ್ತಿಲ್ಲ
ಅರಿಯದೆ ಮೂಡುವ ಪ್ರೀತಿಗೆ ಹೃದಯ ಶರಣು ಎನ್ನುತಿದೆ 
ನಿನ್ನ ಪಿಸುಮಾತಿಗೆ  ಕಣ್ಣ ಸನ್ನೆಗೆ  ತವಕಗಳು ನಿಲ್ಲುತಿಲ್ಲ