Thursday, June 14, 2012

ಯಾಕೆ


ಮನದಲ್ಲಿ ಹುದುಗಿತ್ತ ಭಾವನೆಗಳ ಕೆಣಕಿದೆ ನೀನು 
ಹೊಣೆಗಾರ್ತಿ ನಾನಲ್ಲ ಮತ್ತೇಕೆ ಈ ನೆನಪುಗಳ ಸಜೆ ನನಗೆ 

ಬಾ ಎಂದು ಕೂಗಿಲ್ಲ ಆದರೂ ಬಂದೆ ಕಣ್ಮುಂದೆ ನೀನು 
ಕೂಗಿದ ದನಿಯೂ ನನ್ನದಲ್ಲ ಹೀಗೇಕೆ ಕುರುಡು ಅನುಭವ ಕಣ್ಣಿಗೆ 

ಕೈ ನೀಡಿ ಕರೆದಿಲ್ಲ, ಕೈ ಇತ್ತು ಕೂತಿಲ್ಲ ನಿನ್ನ ಕರಗಳಲ್ಲಿ ನಾನು 
ನಡುಕದ ಭಾವ ಹುಟ್ಟಿದೆ ನನ್ನಲಿ ಯಾಕೆ ಮತ್ತೆ ಈ ಥರ ಬೆಸುಗೆ 

ದನಿಯ ಅರಸಿ ಬಂದಿಲ್ಲ,ದಣಿವು ಇನ್ನು ಆರಿಲ್ಲ,ಮರೆತಿಲ್ಲ ಆ ದಿನ ನಾನು 
ಕೂಗುವ  ಹಕ್ಕನು ಕೊಟ್ಟೆ,ಕೂಗಲು ಶಕ್ತಿಯ ಕೊಟ್ಟೆ,ಯಾಕೆ ಈ ಜೀವಕೆ