Wednesday, June 27, 2012

ನೆಲ್ಲಿಕಾಯಿ ಮತ್ತು ತಾತ

 

ನಾನು ಒಂದು ದಿನ ಕಂಡ ಕನಸು ನಿಜವಾದ ರೀತಿಯನ್ನು ನಿಮ್ಮೆಲ್ಲರ ಮುಂದಿಡುತ್ತಿದ್ದೇನೆ. ಪ್ರಗತಿ ಆಟೋಮೆಶನ್ಸ್ ನಲ್ಲಿ ಕೆಲಸ  ಮಾಡುತ್ತಿರುವಾಗ ದಿನಾಲು ಬಸ್ ಪ್ರಯಾಣ ಮಾಮೂಲಾಗಿತ್ತು. ಹಾಗೇನೆ ದಿನಾಲು ಬಸ್ ಸ್ಟಾಪ ಗೆ  ಬಂದು ಬಸ್ ಗಾಗಿ ಕಾಯ್ತಾ ನಿಲ್ಲುತ್ತಿದ್ದೆ . ನನ್ನ ಜೊತೆ ಒಬ್ಬ ತಾತನು ಕೂಡ ಅದೇ ಬಸ್ ಗೆ ನನ್ನ ಜೊತೆ ಕಾಯ್ತಾ ಇದ್ರು. ನಮ್ಮದು ಒಂದು ರೀತಿ ನೋಡಿದ್ರೆ ತಾತ ಮೊಮ್ಮಗಳು ಜೋಡಿ ಅನ್ನಬಹುದು. ಮತ್ತೆ ಸಂಜೆ ಬರೋವಾಗ ಕೆಲವೊಮ್ಮೆ ನಂಗೆ ಸಿಗ್ತಾ ಇದ್ರು. ತಾತಾ ಅಂಗವಿಕಲ ಹಾಗಾಗಿ ನಂಗೆ ಸೀಟ್ ಸಿಕ್ಕಿದ್ರೆ ನಾನು ಅವರಿಗೆ ಬಿಟ್ಟು ಕೊಡ್ತಾ ಇದ್ದೆ. ಹೀಗೆ ನಮ್ಮ ದಿನಚರಿ ಸಾಗ್ತಾ ಇತ್ತು.

ತಾತ ದಿನಾ ಅವನ ಮಗನ ಬಗ್ಗೆ ಮತ್ತು ಹೆಂಡತಿ ಬಗ್ಗೆ ಹೇಳ್ತಾ ಇದ್ರು.ಅವರು ಮೂಲತಃ ರಾಜಸ್ಥಾನದವರು,ಕನ್ನಡ ಮಾತಾಡೋಕೆ ಬರ್ತಾ ಇರ್ಲಿಲ್ಲ .ಅದಕ್ಕೆ ಹಿಂದಿ ಭಾಷೆ ನಲ್ಲಿ ಮಾತಾಡ್ತಿದ್ರು. ನಾನು ಕೂಡ ಬಿಜಾಪುರ ದಲ್ಲಿ ವ್ಯಾಸಂಗ ಮಾಡಿದುದ್ದರಿಂದ ಹಿಂದಿ ಸ್ವಲ್ಪ ಮಟ್ಟಿಗೆ ಮಾತಾಡ್ತಿದ್ದೆ.ಹಾಗೆ ದಿನಾ ಬಸ್ ಬರೋ  ತನಕ ನಮ್ಮ ಸಂಭಾಷಣೆ ಸಾಗ್ತಾ ಇತ್ತು.

ತಾತನಿಗೆ ಅಂದಾಜು ೫೫ ವರ್ಷ ಇರಬಹುದು. ಮಗನನ್ನ ಹಾಸ್ಟೆಲ್ ನಲ್ಲಿ ಇಟ್ಟು ಇಂಜಿನಿಯರಿಂಗ್ ಓದಿಸ್ತಾ ಇದ್ದರು  .ಹೆಂಡತಿನು ಕೆಲಸದಲ್ಲಿ ಇದ್ಲು. ನಮ್ಮ PG ಎರಡನೇ ರಸ್ತೆ ಯಲ್ಲಿ ತಾತನ ಮನೆ. ಯಾವಾಗಲು ತಾತ ಮನೆಗೆ ಬಂದು ಹೋಗಮ್ಮ ಅಂತ ಹೇಳ್ತಾ ಇದ್ರು. ನಾನು ಒಂದು ದಿನಾ ತಾತನ ಮನೆಗೆ ನನ್ನ ಗೆಳತಿ ಜೊತೆ ಹೋಗಿದ್ದೆ .ಹೆಂಡತಿಯ ಪರಿಚಯ ಆಯ್ತು.ಮಗ ರಜೆಗೆ ಬಂದಿದ್ದರಿಂದ ಅವನ ಪರಿಚಯನೂ ಆಯ್ತು. ತಾತ ಸ್ವಲ್ಪ ಹೊತ್ತಿನ ನಂತರ ಪ್ರೀತಿ ಇಂದ ಮಗಳನ್ನು ಗಂಡನ ಮನೆಗೆ ಬೀಳ್ಕೊಡುವ ಹಾಗೆ ಕಳುಹಿಸಿ ಕೊಟ್ಟರು. ತಾತನ ಆತಿಥೆಯಕ್ಕೆ ದನ್ಯವಾದ ಹೇಳಿ ನಾವು PG ಗೆ ಬಂದೆವು.

ಹೀಗೆ ನಾನು ತಾತನ್ನ ತುಂಬಾ ಹಚ್ಚಿಕೊಂಡಿದ್ದೆ.ದಿನಾಲೂ ತಾತ ಬರೋವಾಗ ಏನಾದ್ರು ತಿನ್ನೋದಕ್ಕೆ ಕೊಡ್ತಿದ್ರು . ನಾನು ನನ್ನ ಹತ್ರ ಇರೋದನ್ನ ಅವ್ರಿಗೆ ಕೊಡ್ತಾ ಇದ್ದೆ. 

ಒಂದು ದಿನಾ ರಾತ್ರಿ ನನ್ನ ಕನಸಲ್ಲಿ ತಾತ ಬಂದಿದ್ರು. ಅದೇ ಬಸ್ ಸ್ಟಾಪ್, ಅದೇ ಅಂಗವಿಕಲ ತಾತ,ಅದೇ ಮಾತುಗಳು,ಅದೇ ಊಟದ ಬ್ಯಾಗ್ ತಾತನ ಕೈಯಲ್ಲಿ, ನಾನು ಬಂದು ತಾತಂಗೆ ಗುಡ್ ಮಾರ್ನಿಂಗ್ ಹೇಳಿ ಬಸ್ ಗಾಗಿ ಕಾಯುತ್ತ ನಿಂತಿದ್ದೆ. ತಾತ ಸುಮಾರು ಹೊತ್ತು ಆದ ಮೇಲೆ ಬ್ಯಾಗ್ ನಿಂದ ಏನೋ ತಿನ್ನಲು ಕೊಟ್ಟರು. ನೋಡಿದರೆ ನೆಲ್ಲಿಕಾಯಿ. ಹುಳಿ ತಿನ್ನಲು   ಯಾವಾಗಲು ಮುಂದಿರುವ ನಾನು ಕೊಟ್ಟ ತಕ್ಷಣ ತಿನ್ನಲು ಶುರುಮಾಡಿದೆ. ಅರ್ಧ    ಮುಗಿದಾದ ಮೇಲೆ ಥ್ಯಾಂಕ್ಸ್ ಹೇಳಿ ಎಲ್ಲಿಂದ ತಂದಿರಿ  ತಾತ ಅಂತ ಕೇಳಿದೆ . ತಾತ ಮನೆಯ ಕಾಂಪೌಂಡಿನಲ್ಲಿ ಬೆಳೆದ ಮರದಿಂದ ತಂದೆ ಅಂದ್ರು .ನೆಲ್ಲಿಕಾಯಿ ತಿನ್ನುತ್ತ ನನ್ನ ರಾತ್ರಿ ಕಳೆದೆ. ಬೆಳಕು ಹರಿಯಿತು ಛೆ ಇದು ಕನಸಾ ಎಂದು ಮೇಲೆದ್ದು ಆಫೀಸ್ ಗೆ ಹೊರಡಲು ರೆಡಿ ಆದೆ.

ಕನಸಿನ ಗುಂಗಲ್ಲಿ ಆವತ್ತು ಆಫೀಸ್ ಗೆ ತಡವಾಯಿತು. ಯಾವತ್ತು ಬರದೆ ಇದ್ದ ತಾತ ಇವತ್ತು ಯಾಕೆ ಕನಸಲ್ಲಿ ಬಂದ್ರು ಅನ್ನುವ ಪ್ರಶ್ನೆಗೆ ಮಾತ್ರ ಉತ್ತರ ಸಿಗದೇ ಪೇಚಾಡುತಿದ್ದೆ. ಸರಿ ತಾತನಿಗೆ ಬಸ್ ಸ್ಟಾಪ್ ನಲ್ಲಿ ಕನಸನ್ನು ಹೇಳಬೇಕು ಅಂದು ಕೊಂಡು ಬೇಗನೆ ರೆಡಿ ಆಗಿ ಬಸ್ ಸ್ಟಾಪ್ ಗೆ ಓಡಿದೆ. ತಾತ ಇನ್ನೂ ಬಸ್ ಗಾಗಿ ಕಾಯುತ್ತಿರುವದನ್ನು ಕಂಡು ನಿಟ್ಟುಸಿರು ಬಿಟ್ಟೆ .

ತಾತನನ್ನ ನೋಡಿದ ತಕ್ಷಣ ರಾತ್ರಿಯ ಕನಸು ನೆನಪಾಯಿತು.ಏನು ವಿಚಿತ್ರ ಅಂದ್ರೆ ತಾತ ಕನಸಲ್ಲಿ ಹಾಕಿರೋ ಶರ್ಟ್ ನ್ನು ಹಾಕ್ಕೊಂಡು ಬಂದಿದ್ರು. ಅದೇ ಬ್ಯಾಗ್ ಕೂಡ ಕೈನಲ್ಲಿ. ಸರಿ ಅಂತ ಮತ್ತೆ ನಾನು ತಾತ ಮಾತಿಗೆ ತಯಾರಾದ್ವಿ. ಸ್ವಲ್ಪ ಹೊತ್ತಿನ ನಂತರ ತಾತ ಬ್ಯಾಗ್ ನಲ್ಲಿ ಕೈ ಹಾಕಿದರು.ತಗೋ ಎಂದು ಕೈ ಮುಂದೆ ಚಾಚಿ ಕೊಟ್ಟರು. ನಾನು ಒಂದು ನಿಮಿಷ ಅವಕ್ಕಾಗಿ ನಿಂತೆ. ನಾನಾ ಸುತ್ತ ಮುತ್ತಲ ಜಗತ್ತು ನಿಂತು ಹೋಯಿತು ಅನ್ನುವ ಭಾಸ ಮೂಡಿತು. ಮುಂದೆ ಚಲಿಸುವ ವಾಹನಗಳ ಶಬ್ದವು ಕೇಳಿಸದೆ ಹೋಯಿತು. ಮತ್ತೆ  ಗೊಂದಲದಿಂದ ಹೊರಬಂದು ಸುಧಾರಿಸಿಕೊಳ್ಳುತ್ತಾ ಕೈ ಮುಂದೆ ಚಾಚಿ ಕೊಡಿ ಎಂದೆ. ತಾತ ನನಗೆ ಕೊಟ್ಟಿದ್ದೇನು ಗೊತ್ತ?????????

""ನೆಲ್ಲಿಕಾಯಿ""

ನನ್ನ ಕಂಗಳನ್ನು ನಾನು ನಂಬಲಾದೆ. ಈ ರೀತಿಯ ಅನುಭವ ನನಗೆ ಹೊಸದಾಗಿತ್ತು. ನಂಗೆ ಮುಂದೆ ಏನು ಮಾತನಾಡುವುದೇ ತಿಳಿಯದೆ ತಾತನಿಗೆ ಕೇಳಿದೆ. " ಎಲ್ಲಿಂದ ತಂದ್ರಿ ತಾತ " ಎಂದು. ಅದಕ್ಕೆ ತಾತ ಕೊಟ್ಟ ಉತ್ತರ

 ""ಮನೆಯ ಕಾಂಪೌಂಡಿನಲ್ಲಿ ಬೆಳೆದ ಮರದಿಂದ "" ಅಂತ ಅಂದ್ರು.

ಮರುಕ್ಷಣ ಏನು ಮಾತನಾಡದೆ ತಾತ ನಂಗೆ ನೆಲ್ಲಿಕಾಯಿ ಅಂದ್ರೆ ತುಂಬ ಇಷ್ಟ ಅಂತ ಹೇಳಿ ಬಸ್ ಹತ್ತಿದೆ.