Monday, June 11, 2012

ನಿನಗಾಗಿ


ಕಳೆದಿರುವ  ಕ್ಷಣಗಳ ಇನ್ನೆಂದು ಕೆನುಕದಿರು 
ಮರೆಯದ ನೋವಿನ ಕಥೆಯ ಬುತ್ತಿಯ ಬಿಚ್ಚದಿರು 
ಕೂಡಿಟ್ಟ ಕನಸುಗಳ ಬಲೆಯನೆಂದು ಹೆನೆಯದಿರು 
ಮತ್ತೆ ಸಿಗುವರೆಂಬ ಆಸೆಯ ಮಡುವಿನಲ್ಲಿ ಮುಳುಗದಿರು

ಹುಚ್ಚು ಮನಸ್ಸಿಗೆ ಅರ್ಥವಾಗದು ನೋವಿನ ಆಗಮನ 
ಹೃದಯ ತುಂಬಿ ಬರುವ ದುಃಖದ ಉನ್ಮಾದತನ 
ಅಳುವೊಂದೇ ಉತ್ತರವಾದೀತು ಗೆಳೆಯ ನೆನೆಯದಿರು ಆ ಕ್ಷಣವನ್ನ 
ನೊಂದ ಜೀವದ ಬೆಲೆ ಪ್ರೀತಿ ಅರಿಯದು, ಅದೊಂದು ಬಿಡಿಸದ ಬಂಧನ 

ಹಗಲು ಕನಸು ಕಂಡಿದ್ದು ಸಾಕಿನ್ನು ನೀನು 
ಮುನ್ನುಗ್ಗು ನೀ ಹೊಸ ಚರಿತ್ರೆಯ ಬರೆಯುವೆನು ನಾನು 
ನಿನ್ನ ಒಡಲ ನೋವಿನ ಸಾಗರವ ಸೇರುವೆನು 
ಮೂಡಿಸುವೆ ತಿಳಿ ನೀಲಿ ಆಗಸದ ಛಾಯೆಯ ನಾನು