Tuesday, May 22, 2012

ಕಾಡದಿರು


ಕಣ್ಣೋಟದಿ ಕಾಡುವೆ ಏಕೆ ಹೀಗೆ ಮರೆಯದೆ ಹೋಗುವೆ ನಾನಿನ್ನ
ಕಣ್ತುಂಬಿ ಕೊಲ್ಲುವೆ ಏಕೆ ಬದುಕುವ ಆಸೆ ಇಲ್ಲ  ನನಗಿನ್ನ
ಹೇಳಿದೆ ಒಂದು ಮಾತು ನೀ ತೊರೆದು ಹೋಗುವ ಮುನ್ನ
ಮತ್ತೆ ನೆನೆಯದಿರು ಮುಂದೊಮ್ಮೆ ನನ್ನ ಮೊಗವನ್ನ

ನನ್ನಷ್ಟಕ್ಕೆ ನಾನಿದ್ದೆ ಕೆಣಕಿದೆ ಪ್ರೇಮದ ಬಾಣದಿಂದ
ನೆಟ್ಟ ಕ್ಷಣದಲಿ ನೆತ್ತರು ಎದೆಯಲಿ ಹರಿದಿತ್ತು  ಒಲವಿನಿಂದ
ನೋವು ತಂದ ಅನುಭವ ಕಲುಕಿತ್ತು ಹೃದಯವ
ಬಯಕೆಯ ಬೀಜ ಬಿಟ್ಟಿತ್ತು,ಕಾಯ್ದಿತ್ತು ಹೂ ಬಿಡುವ ಸಮಯವ

ಅರಳುವ ಮುನ್ನ ಉರುಳಿಸಿದೆಯಾ ಪ್ರೀತಿಯ ಕುಡಿಯ
ಹೇಗೆ ಸಹಿಸಲಿ ಮಾಸದ ನೋವಿನ ಭಾಧೆಯಾ
ಬಯಸೆನು ಇನ್ನೆಂದು ನಿನ್ನ ಒಲವಿನ ಅಕ್ಕರೆಯ
ಸಾವಿರ ಜನ್ಮಕೂ ತೀರದ ಅಸಹನೀಯ ವೇದನೆಯ

ನನ್ನ ಕಲ್ಪನೆ


ನಿನ್ನ  ನೋಡಿದ  ಮೊದಲ  ನೋಟ ,ಮೊದಲ  ದಿನ  ,ಹೊಸದೊಂದು  ಲೋಕ  ಶೃಷ್ಟಿ ಮಾಡಿದೆ
ಇನ್ನು  ಜೀವನ  ಪೂರ್ತಿ ನಿನ್ನ  ನೋಡುತ್ತಾ  ಕಳೆಯುವ  ಅವಕಾಶ ದೊರೆತಿದೆ

ಸೂಜಿ  ಕಣ್ಣು , ಚೂಪಾದ  ನೋಟ ,ಪ್ರತಿ  ಬಾರಿ  ನನ್ನ  ಕೆನಕುವಂತಿವೆ  
ಮತ್ತೆ  ಮತ್ತೆ  ನೋಡಿದರೂ  ನೋಡಬೇಕೆನಿಸುವ  ಅಪರೂಪದ  ಕುಸುಮವೇ

ಬಳ್ಳಿಯಂತೆ  ಒರಗಿ  ಕೊಳ್ಳಲೆ  ಒಮ್ಮೆ ,ಸೂರ್ಯ  ಕಾಂತಿಯಂತೆ  ನಾಚಲೇ  ಒಮ್ಮೆ
ಮನದಾಸೆಯ  ಬಿಚ್ಚಿ ,ಪ್ರೀತಿ  ಪರಿಯನು  ಬಿಡಿಸಿ  ಹೇಳಲೇ  ಒಮ್ಮೆ

ದಿನ  ಮುಗಿದರೆ  ಏಕೋ  ಬೇಜಾರು,ಮತ್ತೆ  ನಾಳೆಯೆಂಬ  ದಿನವ  ಕಾಯಲು
ಬರುವ  ದಾರಿಯ  ನೋಡುತ್ತಾ  ನಿಲ್ಲಲೇ ,ಮನವು  ಹಂಬಲಿಸಿದೆ  ನಿನ್ನ  ಬರುವಿಕೆಯ  ನೋಡಲು

ಯುಗ  ಕಳೆದ  ಅನುಭವ,  ಯಾಕೋ  ತಿಳಿಯದು  ನನಗೆ
ಪ್ರತಿ  ಕ್ಷಣ  ಎನಿಸುವ  ಲೆಕ್ಕಿಗನಂತಾದೆ ಕೊನೆಗೆ

ಮಿನುಗುವ  ನಕ್ಷತ್ರಗಳ  ಕಾಯುತ್ತ  ಕುಳಿತೆ
ನೀ  ಕಾಣುವ  ಹುಚ್ಚು  ಕಲ್ಪನೆಯ  ಜೊತೆಗೆ

ಒಲೆವ  ನಿನ್ನ  ನಯನ  ನೋಡಿ  ತೇಲಿ  ಹೋದೆ  ಮುಗಿಲಲಿ
ಇಷ್ಟು  ದಿನ  ಎಲ್ಲಿ  ಅಡಗಿದ್ದೆ  ಎನ್ನುವ  ಪ್ರಶ್ನೆ  ಮನದಲಿ

ಇದು  ಬರಿ  ಕಲ್ಪನೆಯೂ  ಅಥವಾ  ವಿಸ್ಮಯವೋ  ನಾನರಿಯದಾದೆ  
ಸಾಗುತಿದೆ  ನನ್ನ   ಬರಹದ  ಸಾಲು  ನಿಲ್ಲದೆ  ಹಿಂದೆ .