Monday, July 2, 2012

ಕ್ಷಮಿಸಿಬಿಡು ಒಮ್ಮೆ ನನ್ನ ಹಾಗೆ ಸುಮ್ಮನೆ



ನನ್ನ ಸ್ವಾರ್ಥವ ಅರಿಯದೆ ತಪ್ಪು ಮಾಡಿದೆ ಗೆಳೆಯ 
ನಿನ್ನ ಬಿಟ್ಟು ಬದುಕುವ ಕ್ಷಣ ಕೂಡ ನಾ ಯೋಚಿಸಲಾರೆ 
ಒಂಟಿತನ ಎದುರಿಸುವ ಧೈರ್ಯ ಇಲ್ಲ ಈ ಜೀವಕೆ 
ತಪ್ಪು ಮಾಡಿರುವೆ  ಕ್ಷಮಿಸಿಬಿಡು ಒಮ್ಮೆ ನನ್ನ ಹಾಗೆ ಸುಮ್ಮನೆ 

ಅರಿಯದೆ ಮಾಡಿದ ತಪ್ಪು ಮರೆಯಲಿ ನೀಡಿದೆ ನೋವು 
ಸಹಿಸಲಾರೆ ಈ ಘೋರ ತೀವ್ರತೆಯ ಅನುಭವ ಸಾಕಿನ್ನು 
ಮಗುವ ಸಂತೈಸುವ ತಾಯಿ ನೀನಾಗು ತುಸು ಪ್ರೀತಿಯ ನೀಡು 
ತಪ್ಪು ಮಾಡಿರುವೆ  ಕ್ಷಮಿಸಿಬಿಡು ಒಮ್ಮೆ ನನ್ನ ಹಾಗೆ ಸುಮ್ಮನೆ 

ಮೋಡ ಕರಗಿ ಮಳೆಯಾದಂತೆ ಮನಸ್ಸು ಕರಗಿಸಿ ನೀರಾಗಿಸು 
ನೀನಿಲ್ಲದ ನಾನು ನೀರಿಲ್ಲದ ಮರುಭೂಮಿ,ಸೂರಿಲ್ಲದ ಮನೆ 
ಬೇಕೇ ಈ ಹಾಳು ಬದುಕು ನನಗೆ ಸಾಯಲೂ ಆಗದು ಬದುಕಲೂ ಆಗದು 
ತಪ್ಪು ಮಾಡಿರುವೆ  ಕ್ಷಮಿಸಿಬಿಡು ಒಮ್ಮೆ ನನ್ನ ಹಾಗೆ ಸುಮ್ಮನೆ 



ನಿನ್ನ ಸ್ನೇಹ


ನಿನ್ನ ನಗು ನನ್ನ ನಗುವಾಗಿರಲು ನಿನ್ನ ಅಳು ನನ್ನ ಅಳುವಾಗಿರಲು 
 ಕತ್ತಲು ಆವರಿಸಿದೆ ಸುತ್ತಲು,ಗೆಳೆಯ ಎಲ್ಲಿರುವೆ ಎಂದು ಹುಡುಕಲು 
ದಾರಿ ತಿಳಿದರೂ ಹೆಜ್ಜೆ ಮುಂದೆ ಸಾಗದು ನಿನ್ನ ಬಿಟ್ಟು ಕಾಲ್ಗಳು ಎಡುವುತಿರಲು 
 ನಿಂತ ನೆಲದಲಿ ಹುಡುಕಿವೆ ಕಣ್ಗಳು ಆಸರೆಯ ಬೇಡಲು ಸುತ್ತಮುತ್ತಲು 

ಕೂಗಿ ಕರೆಯಲು ಕ್ಷಣದಲಿ ಬರುವೆ ಸಂತ್ವಾನ ನೀ ನೀಡಲು
ಅಳುವ ಮುನ್ನ ಕಣ್ಣೋರೆಸುವೆ, ನಗುವ ಮುನ್ನ ಕಣ್ಣು ಮಿಟುಕಿಸುವೆ
ಏನೆಂದು ಬರೆಯಲಿ ಈ ಸಾಲುಗಳಲಿ,ಬರೆಯುವ ಕಲೆ ನೀ ಕಲಿಸಿದೆ 
ಕವಿ ನಾನಾದೆ ನಿನ್ನಿಂದ ನಿನ್ನ ಪ್ರತಿ ನೆನಪಿನ ಕ್ಷಣಗಳ ನಾ ಮೂಡಿಸಿದೆ


ಬೇಕಿಲ್ಲ ಅನ್ನ್ಯರ ಅವಶ್ಯಕತೆ ನನಗೆ ನಿನ್ನ ಉಸಿರಿರೋ ತನಕ                    
ಕೇಳೆನು ಇನ್ನೊಬ್ಬರ ಮಾತ ನಿನ್ನ ನುಡಿಗಳು ಇರೋ ತನಕ
 ಬಯಸಿ ಬಂದೆಯೋ ಬಯಸದೆ ಬಂದೆಯೋ ನಾನೊಂದೂ ಅರಿಯದಾದೆ  
ಇನ್ನ್ಯಾಕೆ ಯೋಚನೆ ನೀನಿರುವಾಗ ಜೊತೆಗೆ ಅನ್ನೋ ಭಾವ ತಂದೆ 

ಮುನಿಸಿಕೊಂಡರೂ ನೀ  ಬರುವೆ ಎಂಬ ಖಾತರಿ ಇದೆ ನನಗೆ 
ತೋರಿಸುವೆ ಆಸೆ ಇಂದ ಹುಟ್ಟುವ ಸೋಲಿಲ್ಲದ ನಗೆ ನಿನಗೆ 
ನನ್ನ ಸಣ್ಣತನದ ಅರಿವು ಮೂಡಿಸುವ ನಿನ್ನ ನಯನಗಳು 
ಮತ್ತೆ ತಿರುಗಿ ತಿರುಗಿ ಬೀಗುತಿವೆ ಕಣ್ಣಂಚಲ್ಲಿ ಹಾವ ಭಾವಗಳು