ನನ್ನ ಸ್ವಾರ್ಥವ ಅರಿಯದೆ ತಪ್ಪು ಮಾಡಿದೆ ಗೆಳೆಯ
ನಿನ್ನ ಬಿಟ್ಟು ಬದುಕುವ ಕ್ಷಣ ಕೂಡ ನಾ ಯೋಚಿಸಲಾರೆ
ಒಂಟಿತನ ಎದುರಿಸುವ ಧೈರ್ಯ ಇಲ್ಲ ಈ ಜೀವಕೆ
ತಪ್ಪು ಮಾಡಿರುವೆ ಕ್ಷಮಿಸಿಬಿಡು ಒಮ್ಮೆ ನನ್ನ ಹಾಗೆ ಸುಮ್ಮನೆ
ಅರಿಯದೆ ಮಾಡಿದ ತಪ್ಪು ಮರೆಯಲಿ ನೀಡಿದೆ ನೋವು
ಸಹಿಸಲಾರೆ ಈ ಘೋರ ತೀವ್ರತೆಯ ಅನುಭವ ಸಾಕಿನ್ನು
ಮಗುವ ಸಂತೈಸುವ ತಾಯಿ ನೀನಾಗು ತುಸು ಪ್ರೀತಿಯ ನೀಡು
ತಪ್ಪು ಮಾಡಿರುವೆ ಕ್ಷಮಿಸಿಬಿಡು ಒಮ್ಮೆ ನನ್ನ ಹಾಗೆ ಸುಮ್ಮನೆ
ಮೋಡ ಕರಗಿ ಮಳೆಯಾದಂತೆ ಮನಸ್ಸು ಕರಗಿಸಿ ನೀರಾಗಿಸು
ನೀನಿಲ್ಲದ ನಾನು ನೀರಿಲ್ಲದ ಮರುಭೂಮಿ,ಸೂರಿಲ್ಲದ ಮನೆ
ಬೇಕೇ ಈ ಹಾಳು ಬದುಕು ನನಗೆ ಸಾಯಲೂ ಆಗದು ಬದುಕಲೂ ಆಗದು
ತಪ್ಪು ಮಾಡಿರುವೆ ಕ್ಷಮಿಸಿಬಿಡು ಒಮ್ಮೆ ನನ್ನ ಹಾಗೆ ಸುಮ್ಮನೆ
No comments:
Post a Comment