Thursday, April 26, 2012

ನೆನಪಿನಲ್ಲಿ


ತಂಗಾಳಿ  ಬೀಸಿ  ಕರೆಯುತಿದೆ
ಮನಸ್ಸು  ಮಧುರಥೆಯ    ಬಯಸುತಿದೆ
ಚಿತ್ತ  ಮನಸ್ಸು  ಚಂಚಲ  ಗೊಂಡಿದೆ
ಎಲ್ಲೆ  ಮೀರಿ  ಭಾವನೆಗಳು  ಬೀಗುತಿವೆ

ಸಹಿಸದೆ  ಹರಿಬಿಟ್ಟೆ  ಮನವೆಂಬ  ಕುದುರೆಯ
ನಿಲ್ಲದೆ  ಓಡುತಿಹುದು  ದಾಟಿ  ಎಲ್ಲ  ಕತ್ತಲೆಯ
ಒಲ್ಲದ   ಜೀವಕೆ  ಹನಿಗಳ   ಸ್ಪರ್ಶವ   ನೀಡಿದೆಯಾ 
ಮತ್ತೆ  ಬದುಕುವ   ಹುಮ್ಮಸ್ಸಿನ್ನು  ತಂದೆಯಾ

ಹೊತ್ತು  ಮುಳುಗಿದ  ಭಾಸ  ಕಾಡುತಿದೆ  ನನ್ನ
ನಿನ್ನ  ಅಗಲಿಕೆಯ   ನೋವು  ಆಕ್ರಮಿಸಿದೆ  ಇನ್ನ
ತೊರೆದು  ಹೋಗದಿರು  ಹೀಗೆ  ಇನ್ನೊಮ್ಮೆ  ನನ್ನ
ಸ್ಪರ್ಶ  ಮರೆತು  ಉಸಿರು  ಕಳೆದು  ಹೋಗುವ  ಮುನ್ನ

ಕೊರೆಯುವ ಚಳಿ ,ಇಬ್ಬನಿಯ ಹನಿ , ಮೋಡದ ಮುಸುಕು  
ಕಗ್ಗತ್ತಲೆಯ   ಬಾನು  ,ಓಡುತಿರುವ   ಮೋಡಗಳು
ಎಲ್ಲ   ನನ್ನ  ಗೆಳೆಯನ   ಬರುವಿಕೆಯ   ಸೂಚನೆಗಳು
ಪ್ರಕೃತಿಯ   ಚಿತ್ರ  ಬದಲಿಸಿದ   ತಲ್ಲಣದ   ಕ್ಷಣಗಳು