ತಂಗಾಳಿ ಬೀಸಿ ಕರೆಯುತಿದೆ
ಮನಸ್ಸು ಮಧುರಥೆಯ ಬಯಸುತಿದೆ
ಚಿತ್ತ ಮನಸ್ಸು ಚಂಚಲ ಗೊಂಡಿದೆ
ಎಲ್ಲೆ ಮೀರಿ ಭಾವನೆಗಳು ಬೀಗುತಿವೆ
ಸಹಿಸದೆ ಹರಿಬಿಟ್ಟೆ ಮನವೆಂಬ ಕುದುರೆಯ
ನಿಲ್ಲದೆ ಓಡುತಿಹುದು ದಾಟಿ ಎಲ್ಲ ಕತ್ತಲೆಯ
ಒಲ್ಲದ ಜೀವಕೆ ಹನಿಗಳ ಸ್ಪರ್ಶವ ನೀಡಿದೆಯಾ
ಮತ್ತೆ ಬದುಕುವ ಹುಮ್ಮಸ್ಸಿನ್ನು ತಂದೆಯಾ
ಹೊತ್ತು ಮುಳುಗಿದ ಭಾಸ ಕಾಡುತಿದೆ ನನ್ನ
ನಿನ್ನ ಅಗಲಿಕೆಯ ನೋವು ಆಕ್ರಮಿಸಿದೆ ಇನ್ನ
ತೊರೆದು ಹೋಗದಿರು ಹೀಗೆ ಇನ್ನೊಮ್ಮೆ ನನ್ನ
ಸ್ಪರ್ಶ ಮರೆತು ಉಸಿರು ಕಳೆದು ಹೋಗುವ ಮುನ್ನ
ಕೊರೆಯುವ ಚಳಿ ,ಇಬ್ಬನಿಯ ಹನಿ , ಮೋಡದ ಮುಸುಕು
ಕಗ್ಗತ್ತಲೆಯ ಬಾನು ,ಓಡುತಿರುವ ಮೋಡಗಳು
ಎಲ್ಲ ನನ್ನ ಗೆಳೆಯನ ಬರುವಿಕೆಯ ಸೂಚನೆಗಳು
ಪ್ರಕೃತಿಯ ಚಿತ್ರ ಬದಲಿಸಿದ ತಲ್ಲಣದ ಕ್ಷಣಗಳು
No comments:
Post a Comment