Friday, April 20, 2012

ಪ್ರೀತಿ


ಜೀವನ  ಒಂದು ಬಹು  ದೊಡ್ಡ  ಸಾಗರ 
ಅದರಲಿ ಅಡಗಿದೆ  ಪ್ರತಿಯೊಬ್ಬರ  ಪ್ರೇಮದ  ಆಗರ 

ಹೇಳಲಾರದೆ  ಕೇಳಲಾರದೆ  ಪಡುವ  ಮುಜುಗರ 
ತಂದಿದೆ  ಮನಸ್ಸಿಗೆ  ತೀರಲಾರದ  ಬೇಸರ 

ನೀನಾಗೇ  ವ್ಯಕ್ಥಪಡಿಸಬಾರದೇ ಪ್ರಿಯಕರ 
ನನಗಾಗುವುದು  ಆಗ  ಬಹು ದೊಡ್ಡ  ಸಡಗರ 

ನಡೆದು  ಬಿಡಲಿ  ಪ್ರೀತಿಯ  ಮಹಾ  ಸಮರ 
ಸಾರುವೆ  ಜಗಕೆ  ಈ   ನಮ್ಮ  ಪ್ರೀತಿಯ  ಸುಮಧುರ 

ನಿನ್ನ  ಬಾಹು   ಭಂಧನದಲ್ಲೊಮ್ಮೆ ಸಿಲುಕುವ  ಆಸೆ  ನನಗೆ  ಅಪಾರ 
ಪಾರಾಗುವ  ದಾರಿ  ಮರೆತು  ನಾ  ಸಾಗುವೆ  ನಿನ್ನ  ಜೊತೆ  ಬಹು  ದೂರ 

ಜೊತೆಗೂಡಿದ  ದಾರಿ  ತಲುಪಿದೆ  ಒಂದು  ಕಡಲ  ತೀರ 
ದಾರಿ  ಕಾಣದೆ  ಹೃದಯ   ಹೊರಡಿಸಿದೆ  ಮೂಕ  ಸ್ವರ 

ಪಯಣದ  ಕೊನೆ  ತಿಳಿಸದೆ  ಮರೆಯದೆಯಾ  ಚೋರ 
ನಿನ್ನ  ನೆನಪಿನ  ಅಂಗಳಕೆ  ಮರಳಿ  ನಾ  ಹೇಗೆ  ಬರಲಿ  ಧೀರ 

ಹಿಡಿ  ಪ್ರೀತಿಗಾಗಿ  ಹಂಬಲಿಸಿ  ಮನ  ಹೊರಡಿಸಿದೆ  ಅಪಸ್ವರ 
ಬಂದು  ಸಂತೈಸು  ಒಮ್ಮೆ  ನಮ್ಮ  ಪ್ರೀತಿಯಾಗಲಿ  ಅಜರಾಮರ 

ನೀನಿಲ್ಲದ  ಬದುಕು  ಹೊಳಪಿಲ್ಲದ  ಬಂಗಾರ 
ನೀ  ಬರದೆ  ಹೋದರೆ  ನಾನಾಗುವೆ  ಮಸಣದ  ದಾರಿಗೆ  ಬಲು  ಹತ್ತಿರ ...

No comments:

Post a Comment