ಕಂಗಳು ಹುಡುಕುತಿವೆ ಗೆಳೆಯ ನೀನೆಲ್ಲಿರುವೆ ಎಂದು
ಹರಿಸಿವೆ ನೋಟಗಳ ದಾರಿಯುದ್ದಕೂ ನಿನ್ನ ಬರುವಿಕೆಗೆಂದು
ಕಣ್ಮರೆಯಾಗಿ ಕಾಡುತಿಹೆ ಏಕೆ ಹಂಬಲಿಸಿದೆ ಮನಸ್ಸು
ಬಾ ಇನ್ನೊಮ್ಮೆ ಮತ್ತೆ ಹುಡುಕದಿರಲಿ ನಾ ಬೇಸತ್ತು
ಕಾಯುವ ಸುಖ ಹೆಚ್ಚಿಸಿದೆ ತವಕವ ನನ್ನಲಿ ಹೀಗೆ
ಏನೆಂದು ಹೇಳಲಿ ಅದರ ಸೊಗಸಾ ನಾ ಸೋತು ಹೋಗಿಹೆ
ಸುಮ್ಮನೆ ಮೂಡಿದೆ ನಗುವು ಮೊಗದಲಿ ಏಕೋ ಹಾಗೆ
ಕಾಲ್ಗಳು ಗೆರೆಗಳ ಬರೆದಿವೆ ಕೈಗಳು ಬಳೆಗಳ ದೂಡಿವೆ
ಹುಸಿಮುನಿಸು ಬಂದಿದೆ ತಡಮಾಡದೆ ಬಾ ಬೇಗ
ಮುಖ ತಿರುಗಿಸಿ ಮಾತನಾಡುವಾಸೆ ನಿನ್ನೊಂದಿಗೀಗ
ಸಂತೈಸುವ ಕೈಗಳ ಸ್ಪರ್ಶ ಬೇಕಾಗಿದೆ ನನಗೀಗ