Thursday, June 28, 2012

ಕಾದಿರುವೆ ನಿನಗಾಗಿ


ಕಂಗಳು ಹುಡುಕುತಿವೆ ಗೆಳೆಯ ನೀನೆಲ್ಲಿರುವೆ ಎಂದು
ಹರಿಸಿವೆ ನೋಟಗಳ ದಾರಿಯುದ್ದಕೂ ನಿನ್ನ ಬರುವಿಕೆಗೆಂದು 
ಕಣ್ಮರೆಯಾಗಿ ಕಾಡುತಿಹೆ ಏಕೆ ಹಂಬಲಿಸಿದೆ ಮನಸ್ಸು 
ಬಾ ಇನ್ನೊಮ್ಮೆ ಮತ್ತೆ ಹುಡುಕದಿರಲಿ ನಾ ಬೇಸತ್ತು

ಕಾಯುವ ಸುಖ ಹೆಚ್ಚಿಸಿದೆ ತವಕವ ನನ್ನಲಿ ಹೀಗೆ 
ಏನೆಂದು ಹೇಳಲಿ ಅದರ ಸೊಗಸಾ ನಾ ಸೋತು ಹೋಗಿಹೆ 
ಸುಮ್ಮನೆ ಮೂಡಿದೆ ನಗುವು ಮೊಗದಲಿ ಏಕೋ ಹಾಗೆ
ಕಾಲ್ಗಳು ಗೆರೆಗಳ ಬರೆದಿವೆ ಕೈಗಳು ಬಳೆಗಳ ದೂಡಿವೆ 

ಹುಸಿಮುನಿಸು ಬಂದಿದೆ ತಡಮಾಡದೆ ಬಾ ಬೇಗ 
ಮುಖ ತಿರುಗಿಸಿ ಮಾತನಾಡುವಾಸೆ ನಿನ್ನೊಂದಿಗೀಗ 
ಸಂತೈಸುವ ಕೈಗಳ ಸ್ಪರ್ಶ ಬೇಕಾಗಿದೆ ನನಗೀಗ 
ತುಸು ಮೆಲ್ಲನೆ ಪಿಸುಗುಡುವ ದನಿಯ ಕೇಳಲು ಕಾದಿರುವೆನೀಗ 

No comments:

Post a Comment