Monday, March 26, 2012

ಮನಸ್ಸಿನ ಮಾತು


ಹುಚ್ಚು  ಮನಸ್ಸಿನಲ್ಲಿ  ಹತ್ತೆಂಟು  ಆಸೆಗಳು  ಮೂಡುತಿವೆ    
ಗರಿ  ಬಿಚ್ಚಿ  ಕುಣಿಯುವ   ತವಕದಲಿ  ಮನ  ಮೆರೆಯುತಿದೆ 

ಆಸೆಗಳ  ಬುತ್ತಿ  ಬಿಚ್ಚಿ  ಸವಿ  ನೀಡುವ   ಕಾತುರವಿದೆ 
ಬನಗಳದಿ  ಬೆಳದಿಂಗಳಿನಲ್ಲಿ  ಕುಣಿಯುವ ಆಸೆಯಗುತಿದೆ 

ಒಂದು  ಕ್ಷಣವ ವೆರ್ಥಿಸದೆ  ಪೂರ್ಣ  ಚಂದಿರನ ಕಾಣಬೇಕಿದೆ 
ನನ್ನ ಪ್ರೀತಿಯ ಹುಡುಗನ ಅವನಲ್ಲೊಮ್ಮೆ  ನೋಡುವಂತಾಗಿದೆ 

ಹಸಿರೆಲೆಯ   ಮೇಲೆ  ಮಂಜಿನ   ಹನಿಯು  ನಾನಗಬೇಕಿದೆ 
ನನ್ನ  ನೋಡುವ  ಸಾವಿರ  ಕಣ್ಣುಗಳ  ಬಿಂಬವು  ನೀನಾಗಬೇಕಿದೆ 

ಬೆಟ್ಟದ   ತುದಿಯಲಿ  ನಿನ್ನ   ಹೆಸರೊಮ್ಮೆ  ಕೂಗಬೇಕೆನಿಸಿದೆ 
ಪ್ರಥಿದ್ವನಿಸುವ   ನಿನ್ನ  ಹೆಸರ  ಹಾಗೆ  ಕೇಳಬೇಕೆನಿಸಿದೆ 

ಆಹ್ವಾನ



ಕಾಡು  ಬೆಳದಿಂಗಳು  ತಂಪಾದ   ಗಾಳಿಯ ಆಹ್ವಾನ 
ನೀಡಿದೆ  ಮನಸ್ಸಿಗೆ ಇಂಪಾದ  ಮರೆಯದ  ಸಾಂತ್ವನ 
ಬಡಜೀವ  ಬೇಡದೆ ಹೋಯಿತು  ಇನ್ನೇನನ್ನು 
ಗಳಿಸಿದ  ಪ್ರೀತಿಯ ಉಳಿಸುವ  ಆಸೆಯ ಹುಚ್ಚು ತಾಣದ  ಹೊರತು 

ಅರಿಯುವ  ಮುನ್ನ  ಪರಿಚಯಿಸಿದೆ  ಹೃದಯ ನಿನ್ನ ನನಗೆ 
ಬೆಸೆದಿದೆ ನಮ್ಮಿಬ್ಬರ  ಅಂತರಾಳದ   ಆಂತರ್ಯದ ನಗೆ 
ಉಕ್ಕಿ  ಹರಿದಿದೆ  ಸಂಬ್ರಮದ  ಒಲವಿನ  ಬುಗ್ಗೆ 
ತಿಳಿಯದೆ  ಹೋಯಿತೇ  ನನ್ನ  ಮನದ  ಬಯಕೆ  ನಿನಗೆ 

ಹೊತ್ತು  ಸರಿಯಿತು  ಕತ್ತಲು  ಕವಿಯಿತು  ಹುಟ್ಟಿತು  ಕನಸು  ಕಂಗಳಲ್ಲಿ 
ನೆನಪಾಗಿ  ಕಾಡಿದೆ  ಮನದಲ್ಲಿ  ಮೂಡಿದೆ  ಪ್ರೀತಿಯ  ಅಂಗಳದಲ್ಲಿ 
ನನ್ನ  ಕಲ್ಪನೆಗೆ  ಬೇಲಿಯೇ  ಇಲ್ಲ   ನೀ  ತಿಳಿಯೋ  ಗೆಳೆಯ 
ಈ ಕಲ್ಪನಾ  ಲೋಕದ   ಶ್ರುಸ್ಟಿಗೆ  ಕಾರಣ  ನೀನೆಕಾದೆ ಹೇಳೆಯಾ ...