Monday, March 26, 2012

ಆಹ್ವಾನ



ಕಾಡು  ಬೆಳದಿಂಗಳು  ತಂಪಾದ   ಗಾಳಿಯ ಆಹ್ವಾನ 
ನೀಡಿದೆ  ಮನಸ್ಸಿಗೆ ಇಂಪಾದ  ಮರೆಯದ  ಸಾಂತ್ವನ 
ಬಡಜೀವ  ಬೇಡದೆ ಹೋಯಿತು  ಇನ್ನೇನನ್ನು 
ಗಳಿಸಿದ  ಪ್ರೀತಿಯ ಉಳಿಸುವ  ಆಸೆಯ ಹುಚ್ಚು ತಾಣದ  ಹೊರತು 

ಅರಿಯುವ  ಮುನ್ನ  ಪರಿಚಯಿಸಿದೆ  ಹೃದಯ ನಿನ್ನ ನನಗೆ 
ಬೆಸೆದಿದೆ ನಮ್ಮಿಬ್ಬರ  ಅಂತರಾಳದ   ಆಂತರ್ಯದ ನಗೆ 
ಉಕ್ಕಿ  ಹರಿದಿದೆ  ಸಂಬ್ರಮದ  ಒಲವಿನ  ಬುಗ್ಗೆ 
ತಿಳಿಯದೆ  ಹೋಯಿತೇ  ನನ್ನ  ಮನದ  ಬಯಕೆ  ನಿನಗೆ 

ಹೊತ್ತು  ಸರಿಯಿತು  ಕತ್ತಲು  ಕವಿಯಿತು  ಹುಟ್ಟಿತು  ಕನಸು  ಕಂಗಳಲ್ಲಿ 
ನೆನಪಾಗಿ  ಕಾಡಿದೆ  ಮನದಲ್ಲಿ  ಮೂಡಿದೆ  ಪ್ರೀತಿಯ  ಅಂಗಳದಲ್ಲಿ 
ನನ್ನ  ಕಲ್ಪನೆಗೆ  ಬೇಲಿಯೇ  ಇಲ್ಲ   ನೀ  ತಿಳಿಯೋ  ಗೆಳೆಯ 
ಈ ಕಲ್ಪನಾ  ಲೋಕದ   ಶ್ರುಸ್ಟಿಗೆ  ಕಾರಣ  ನೀನೆಕಾದೆ ಹೇಳೆಯಾ ...   

No comments:

Post a Comment