ಮೂಡಣದ ಸೂರ್ಯ ಉದಯಿಸುವ ವೇಳೆಯಲಿ
ಹಕ್ಕಿಗಳು ಗರಿ ಬಿಚ್ಚಿ ಹಾರುವ ಸಮಯದಲಿ
ಏನಿದು ಹೊಸತನ ಕಾಣುತಿದೆ ನನ್ನಲಿ ಇಂದು
ಮತ್ತೆ ಪ್ರೀತಿಯ ಚಿಲುಮೆ ಮೂಡಿದೆ ಇಂದು
ತಂಪಾದ ಗಾಳಿ ಇಬ್ಬನಿಯ ಮುಸುಕು ಪ್ರಕೃತಿಯ ಹೊಸ ಬಗೆ
ಅದಕ್ಕೂ ಮಿಗಿಲಾಗಿ ನಿಂತಿದೆ ಗೆಳೆಯ ನಿನ್ನ ನಗೆ
ನಿಸರ್ಗದ ಮಡಿಲಲ್ಲಿ ಬಾ ಪ್ರೀತಿಯ ಮನೆ ಮಾಡೋಣ
ನಿಜ ಪ್ರೀತಿಯ ಹೊಸ ಹೆಸರು ನಾವಾಗೋಣ
No comments:
Post a Comment