Friday, April 29, 2011

ಅನಾಮಿಕ


ಪ್ರಿಯ   ನಿನ್ನ  ನೆನಪು  ಕಾಡಿದೆ  ಇಂದು 
ಮನಸ್ಸು  ಕುಣಿಯುತಿದೆ  ಮಳೆಯೆಲ್ಲಿ  ನೆಂದು 

ಮರುಕಳಿಸಿದೆ  ನಿನ್ನ  ನೋಡಿದ  ಆ ಮೊದಲ  ಕ್ಷಣ 
ಮೈಯೆಲ್ಲಿ    ತಂದಿದೆ  ಏನೋ  ಹೊಸ  ರೋಮಾಂಚನ 

ಎಷ್ಟು  ದೂರ  ಸರಿದರು  ಕಾಡುತಿದೆ  ನಿನ್ನ  ನೆನಪು 
ಈ  ದಿನ  ತಂದಿದೆ  ನನಗೊಂದು  ಹೊಸ  ಹುರುಪು 

ಜಗತ್ತಿನ   ಎಲ್ಲ   ಹೊಳಪು  ನಿನ್ನ  ಕಣ್ಣಲ್ಲಿ  ನಿಂತಂತಿದೆ 
ಸನ್ನೆ  ಮಾಡಿ  ಕರೆದಂತೆ  ನಿನ್ನ  ಬಳಿಯೆಲ್ಲಿ  ಸುಳಿದಂತೆ 

ಮಳೆ  ನಿಲ್ಲುವ   ಮುನ್ನ  ನೀನೊಮ್ಮೆ  ಸುಳಿಯಬಾರದೇ    ಕಣ್ಮುಂದೆ 
ನನ್ನ  ನೆನಪಿನ   ಅಂಗಳವ   ತಂಪಾಗಿಸಬಾರದೆ      ಇಂದೇ 

ನೆನಪಿನ  ದೋಣಿಯೆಲಿ  ಬಾ ಇಬ್ಬರು  ತೇಲುತ್ತ    ಸಾಗೋಣ 
ಬದುಕಿಗೊಂದು  ಹೊಸ  ಅರ್ಥವ   ಕಲ್ಪಿಸೋಣ 

No comments:

Post a Comment