Saturday, April 16, 2011

ಕಾರಣ ತಿಳಿಸುವೆಯಾ



ಎಲ್ಲಿ  ಹುಡುಕಲಿ  ಗೆಳೆಯ  ನಿನ್ನ  ನಗೆಯ
ಕೋಟಿ  ಕೊಟ್ಟರೂ  ಸಿಗದಿರುವ   ಈ  ಸಿರಿಯಾ

ನೀನೊಮ್ಮೆ  ಬಂದು  ಹೋಗು  ಎನ್ನುವ   ಹಾಗಿಲ್ಲ
ಕೂಗಿ  ಕರೆಯುವ   ದನಿ  ನನ್ನಲ್ಲಿ  ಇಲ್ಲ

ಮತ್ತೆ  ಬರುವೆ  ಎಂಬ  ಆಸೆ  ಮೂಡಿದೆ  ನನ್ನಲ್ಲಿ
ಮನದಲ್ಲಿ  ಹುಟ್ಟಿದೆ  ಹೊಸತೊಂದು  ಮಿಂಚಿನ  ಬಳ್ಳಿ

ಯಾಕೆ  ತೊರೆದೆ  ಎಂಬ  ಕಾರಣವ   ನೀ  ತಿಳಿಸೆಯಾ 
ಕೇಳುಗರ   ಪ್ರಶ್ನೆಗೆ  ಉತ್ತರಿಸುವ   ಸಹಕಾರ  ನೀಡೆಯಾ 

ಮತ್ತೆ  ಬರದಿರು  ನೀ  ನನ್ನ  ಕಣ್ಮುಂದೆ
ಕಣ್ಬಿಟ್ಟು  ನೋಡಲು  ನಾನಿರೆನು  ಇನ್ಮುಂದೆ

No comments:

Post a Comment