ಹುಚ್ಚು ಮನಸ್ಸಿದು ಬೆಚ್ಚನೆಯ ತೋಳನು ಬಯಸುತಿದೆ
ಪ್ರತಿ ನಿಮಿಷ ನಿನ್ನ ಕಂಡ ಅನುಭವವ ಸವಿಯುತಿದೆ
ಕಣ್ಣ ಮಿಟುಕಿಸಲೇ ಮೊಗವ ಮುಚ್ಚಿಕೊಳ್ಳಲೇ ಏನೊಂದೂ ಅರಿಯದಾಗಿದೆ
ಹೀಗೇಕೆ ನನ್ನಲಿ ನಲುಮೆಯ ಚಿಲುಮೆಯ ನವೀನ ಭಾವ ಮೂಡುತಿದೆ
ಕಾತುರದ ಕ್ಷಣಗಣನೆ ಸ್ಥಗಿತವಾಗಿದೆ ನೆನಪಿನ ಅಲೆಗಳಲ್ಲಿ ತೊಯ್ದು
ಹೊಸ ಬದುಕಿನ ಮುನ್ನುಡಿಯ ಬರೆಯಲು ಹೊರಟಿರುವೆ ಈ ದಿನದಂದು
ವಿಸ್ಮಯವೀ ಬದುಕು ಬಲು ಮೋಹಕ ಬಲು ನಾಜೂಕು ಎನಿಸಿದೆ ಇಂದು
ತಿಂಗಳ ಬೆಳದಿಂಗಳು ಚೆಲ್ಲಿದೆ ಅಂಗಳದಿ ಹೊಳಪು ಹೆಚ್ಚಿದೆ ಹೇಳಲಿ ಹೇಗೆಂದು
ಬಯಕೆಗಳ ಸುಳಿಯಲ್ಲಿ ಸಿಲುಕಿಸಿರುವೆ ನನ್ನ ಹೊರಗೆ ಬರಲಾರೆ ನಾನಿನ್ನು
ಮರೆತೆನೆಂದರೂ ಮರೆಯಲಾರೆ ಬರುವೆ ಕೋಲ್ಮಿಂಚಿನಂತೆ ಕಣ್ಣ ಮುಂದೆ ನೀನು
ನೋವು ಮರುಕಳಿಸಿದರೂ ಚಿಂತೆ ಇಲ್ಲ ಚಿತೆ ಮುಂದಿದ್ದರೂ ಭಯವಿಲ್ಲ
ತೇಲುವ ಆಗಸವಾಗಿ ಬಾ ಮುಸ್ಸಂಜೆಯ ಬೆಳಕಾಗಿ ಬಾ ಹೃದಯಕ್ಕೆ ಬೇಲಿಯೇ ಇಲ್ಲ