ಹುಚ್ಚು ಮನಸ್ಸಿನಲ್ಲಿ ಹತ್ತೆಂಟು ಆಸೆಗಳು ಮೂಡುತಿವೆ
ಗರಿ ಬಿಚ್ಚಿ ಕುಣಿಯುವ ತವಕದಲಿ ಮನ ಮೆರೆಯುತಿದೆ
ಆಸೆಗಳ ಬುತ್ತಿ ಬಿಚ್ಚಿ ಸವಿ ನೀಡುವ ಕಾತುರವಿದೆ
ಬನಗಳದಿ ಬೆಳದಿಂಗಳಿನಲ್ಲಿ ಕುಣಿಯುವ ಆಸೆಯಗುತಿದೆ
ಒಂದು ಕ್ಷಣವ ವೆರ್ಥಿಸದೆ ಪೂರ್ಣ ಚಂದಿರನ ಕಾಣಬೇಕಿದೆ
ನನ್ನ ಪ್ರೀತಿಯ ಹುಡುಗನ ಅವನಲ್ಲೊಮ್ಮೆ ನೋಡುವಂತಾಗಿದೆ
ಹಸಿರೆಲೆಯ ಮೇಲೆ ಮಂಜಿನ ಹನಿಯು ನಾನಗಬೇಕಿದೆ
ನನ್ನ ನೋಡುವ ಸಾವಿರ ಕಣ್ಣುಗಳ ಬಿಂಬವು ನೀನಾಗಬೇಕಿದೆ
ಬೆಟ್ಟದ ತುದಿಯಲಿ ನಿನ್ನ ಹೆಸರೊಮ್ಮೆ ಕೂಗಬೇಕೆನಿಸಿದೆ
ಪ್ರಥಿದ್ವನಿಸುವ ನಿನ್ನ ಹೆಸರ ಹಾಗೆ ಕೇಳಬೇಕೆನಿಸಿದೆ
No comments:
Post a Comment