Friday, July 13, 2012

ನಿಂತ ನೀರಿನಲಿ ಬಿಂಬವು ನಿನ್ನದೇ


ನಿಂತ ನೀರಿನಲಿ ಬಿಂಬವು ನಿನ್ನದೇ, ಕಾಮನ ಬಿಲ್ಲಿನ ಬಣ್ಣವು ನಿನ್ನದೇ 
ಕಣ್ಣ ಮಿಟುಕಿಸದೆ ನೋಡುತಿಹೆ ನಿನ್ನ, ಸನಿಹ ಬರಲು ಕಾಯುತಿರುವೆ ಇನ್ನ 
ಎಂಥ ಸೆಳೆತ ,ಎಂಥ ಮೋಡಿ, ಹೆನ್ಮನವ ನವಿರೇಳಿಸುವ ಜಾದೂಗಾರ ನೀನಾ
ಹರಿಬಿಟ್ಟೆ ಮನವ,ತೆರೆದಿಟ್ಟೆ ಹೃದಯವ,ಬಾ ಇನ್ನೊಮ್ಮೆ ಸುಂಕವಿಲ್ಲದೆ  ಈ ದಿನ 

ಕೈ ಬೆರಳು ನಡುಗುತಿವೆ ನೆನೆದರೆ ನಿನ್ನ ಆಗಮನವ 
ಕಂಗಳು ಸೋಲುತಿವೆ ನಿನ್ನ ಕಾಣುವ ತವಕದಿಂದ 
ಹೆಜ್ಜೆ ದಾರಿ ತಪ್ಪುತಿದೆ,ನೀ ಬರುವ ಮುಂಸೂಚನೆಯಿಂದ 
ಹರುಷದ ಬುಗ್ಗೆ ಉಕ್ಕಿ ಹರಿಯುತಿದೆ ನಾಚುವ ಮೊಗದಿಂದ 

ತಾಳದೆ ಹೋದೆನು ಈ ಅನುಭವ ಇನ್ನೂ ದೂರಕೆ 
ಕಾಯಿಸದೇ ಕರುಣಿಸು ನಿನ್ನ ನೋಡುವ ಭಾಗ್ಯವ
ಆಸೆಯ ಉನ್ಮಾದ ಸಹಿಸಲಾರೆ ಸಾಕಿನ್ನು ಹೊಗಳಿಕೆ 
ಕರುಣಿಸು ನಿನ್ನ ಹುಸಿ ನೋಟವ ಹಸಿಯಾಗಿಸುವ ದೈನ್ಯತೆಯ.

1 comment:

  1. ಭಾವನೆಗಳಿಗೆ ಉತ್ತಮ ಪದಗಳಿಂದ ಜೀವ ತುಂಬಿದ್ದೀರಿ :o)

    ReplyDelete