ಕಳೆದಿರುವ ಕ್ಷಣಗಳ ಇನ್ನೆಂದು ಕೆನುಕದಿರು
ಮರೆಯದ ನೋವಿನ ಕಥೆಯ ಬುತ್ತಿಯ ಬಿಚ್ಚದಿರು
ಕೂಡಿಟ್ಟ ಕನಸುಗಳ ಬಲೆಯನೆಂದು ಹೆನೆಯದಿರು
ಮತ್ತೆ ಸಿಗುವರೆಂಬ ಆಸೆಯ ಮಡುವಿನಲ್ಲಿ ಮುಳುಗದಿರು
ಹುಚ್ಚು ಮನಸ್ಸಿಗೆ ಅರ್ಥವಾಗದು ನೋವಿನ ಆಗಮನ
ಹೃದಯ ತುಂಬಿ ಬರುವ ದುಃಖದ ಉನ್ಮಾದತನ
ಅಳುವೊಂದೇ ಉತ್ತರವಾದೀತು ಗೆಳೆಯ ನೆನೆಯದಿರು ಆ ಕ್ಷಣವನ್ನ
ನೊಂದ ಜೀವದ ಬೆಲೆ ಪ್ರೀತಿ ಅರಿಯದು, ಅದೊಂದು ಬಿಡಿಸದ ಬಂಧನ
ಹಗಲು ಕನಸು ಕಂಡಿದ್ದು ಸಾಕಿನ್ನು ನೀನು
ಮುನ್ನುಗ್ಗು ನೀ ಹೊಸ ಚರಿತ್ರೆಯ ಬರೆಯುವೆನು ನಾನು
ನಿನ್ನ ಒಡಲ ನೋವಿನ ಸಾಗರವ ಸೇರುವೆನು
ಮೂಡಿಸುವೆ ತಿಳಿ ನೀಲಿ ಆಗಸದ ಛಾಯೆಯ ನಾನು
No comments:
Post a Comment