ಮುದ್ದು ಮುಖದವನೆ ಮುಗ್ದ ಭಾವದವನೆ
ಪ್ರೀತಿ ಹೊತ್ತ ಮಗಧೀರನೆ
ಕಲ್ಪನಾ ಲೋಕದಲ್ಲಿ ತೇಲಿ ಬಂದೆ ನೀನು
ನೋಡುತ ನಿನ್ನ ಕಳೆದೆ ಸಾವಿರ ಕ್ಷಣಗಳನ್ನು
ಕಣ್ಣೆದುರಿಗಿದ್ದರೂ ಕಾಣದಂತಾದೆ ಏಕೆ ನೀನು
ಮುಟ್ಟಿದರೂ ದೂರ ಸರಿಯುವ ಅನುಭಾವವೇನು
ಕಾಯ್ದಿರುವ ದಿನಗಳ ಲೆಕ್ಕಾಚಾರ ತಪ್ಪಿ ಹೋಯಿತೆನು
ಎನಿಸಲು ಶಕ್ತಿ ಇಲ್ಲ ಹೇಳಲು ಮೂಕವಾದೇನೇನು
ಯಾಕೆ ಈ ವೇದನೆ ನೀ ತಂದೆ ನನಗೆ
ಉಸಿರು ಹಿಡಿದಿರುವೆ,ನೀಗುವೆಯಾ ಬಂದು ಈ ಬೇಯ್ಗೆ
ತೇಲಿ ಬರುವ ಮೋಡಗಳ ಸಾಲಲಿ ಹುಡುಕಿದೆ
ಓದುವ ನದಿಯ ದಡದಲಿ ಕಾಯ್ದು ಕುಳಿತೆ
ದಿನ ಒಂದು ಯುಗದಂತೆ ಕಾಡುತಿದೆ
ಮನಸ್ಸು ಮರೆಯದೆ ಚಡಪಡಿಸಿದೆ
No comments:
Post a Comment