ಎತ್ತ ನೋಡಿದರೂ ನೀನೇ ಕಾಣುವೆ ಇದು ನನ್ನ ಭ್ರಮೆಯಾ
ಸುತ್ತ ತಿರುಗಿದರೂ ನಿನ್ನ ನಗೆ ಕೇಳುತಿದೆ ಇದು ಬರಿ ಕಲ್ಪನೆಯಾ
ಬಿಡಿಸಿ ಹೇಳುವ ಪರಿ ನನಗೆ ತಿಳಿಯದು ಇದು ನನ್ನ ಮುಗ್ಧತೆಯಾ
ಅನುಕ್ಷಣವೂ ನಿನ್ನ ಚಿಂತೆ ನನಗೆ ಇದು ಒಂದು ಅತಿರೇಕವಾ
ತಿರುಗಿ ನೋಡಿದರೂ,ಮುಂದೆ ನಡೆದರೂ ಕಾಣುವೆ ಇದು ಮಾಯೆಯಾ
ಮಾತು ಬಂದರೂ ಆಡದೆ ಸುಮ್ಮನಾದೆ ಇದು ನನಗೆ ಪರೀಕ್ಷೆಯಾ
ಏನು ಹೇಳಬೇಕೋ ಏನು ಕೇಳಬೇಕೋ ಗೊತ್ತಿಲ್ಲ ಇದು ಗೊಂದಲವಾ
ಸಾಕಿನ್ನು ಅರಿತುಕೊ ಹೃದಯದ ಭಾಷೆಯ, ಏಕೆ ನಿನಗೆ ಸಂಕೋಚವಾ ?????
No comments:
Post a Comment