ಗೆಳೆಯ ನಿನ್ನ ನೆನೆದ ಆ ಕ್ಷಣ
ಸಂತಸದಿ ನಲಿಯಿತೆನ್ನ ಮನ
ನೆನೆದು ನೆನೆದು ನಾ ಪಟ್ಟ ಆ ಖುಷಿ
ಮನಸ್ಸಿನ ಬಯಲು ಆಯಿತು ಹಸಿ
ಪ್ರೇಮದ ಸಸಿಯ ನೆಡುವ ಬಾ ಗೆಳೆಯ
ಇಳಿಸುವ ಬಾರಾ ಭಾವದ ಹೊರೆಯ
ಮರದ ನೆರಳಲಿ ಪ್ರೀತಿಯ ಸವಿ ಸವಿಯುವ
ಲೋಕವ ಮರೆತು ನಾವಿಬ್ಬರು ಜೊತೆ ಸಾಗುವ
ಇಬ್ಬನಿಯ ತಂಪು ನಿನ್ನ ಎದೆಯ ಇಂಪು
ಸೇರಿ ಬೀರಿವೆ ಮನದ ಬಾಂದಳಕೆ ಕಂಪು
ಗೆಳೆಯ ನಿನ್ನ ಎದೆಯಲಿ ಹುದುಗುವ ಆಸೆ
ತೀರಿಸುವೆಯ ಈ ನಿನ್ನ ಹೃದಯದ ಕೊನೆಯಾಸೆ
ಪ್ರೀತಿಗೆ ಹಾಕದೆ ಇರು ಯಾವುದೇ ಬೇಲಿ
ಜೊತೆಯಾಗಿ ಸಾಗುವ ಆ ಒಲವಿನಲಿ ತೇಲಿ
No comments:
Post a Comment