ಗೆಳೆಯ ನಿನ್ನ ನಗುವಿಂದ ನನ್ನ ಕಣ್ಣ ಹೊಳಪಿದು ಹೆಚ್ಚುತಿದೆ
ನಿನ್ನ ಇರಿವ ನೋಟದಿಂದ ಬಯಕೆಗಳು ಹುಚ್ಚಾಗುತಿವೆ
ಇರಲಿ ಅನುಭವ ಸಿಹಿಯಾಗಿದೆ ಏಕೋ ಹೇಳಲು ಮುಜುಗರ
ಎದೆಗಾರಿಕೆಗೆ ಸಾಕ್ಷಿಯಾಗಿ ಕೊಡಬಲ್ಲೆ ನಾ ಪ್ರತ್ಯುತ್ತರ
ಕಾಯುವ ಕಣ್ಣು ಕೊಲ್ಲುತಿದೆ ಹೀಗೆ ನಿರರ್ಗಳವಾಗಿ
ಸೋಲುತಿದೆ ಮನಸ್ಸು ಹೀಗೇಕೋ ಸರಾಗವಾಗಿ
ಸನ್ನೆ ಮಾಡಿದೆ ನನ್ನ ಕರೆದಿದೆ ಹೀಗೆ ಸೆರೆ ಹಿಡಿಯಲು
ಜಾರಿದ ಕ್ಷಣದಲಿ ನಿನ್ನ ಎದೆಯಲಿ ಮನೆಯ ಮಾಡಲು
ಬಂಧಿಯಾಗುವೆ ನೀಡುವೆಯಾ ಆಸರೆ ಹೃದಯದಲಿ
ಹೇಳದೆ ಇರುವ ಮಾತನು ಬಚ್ಚಿಡುವೆ ನಾನದರಲಿ
ಈ ಮೌನವು ಎದೆಯಲಿ ನೂಕಿದೆ ನನ್ನ ನಿನ್ನ ಕಡೆಗೆ
ಸೋತರೂ ಕೇಳುತಿದೆ ಕಾರಣವ ಒಲವೆಂಬ ಈ ಬಗೆ
ನಿನ್ನೆದೆಯ ಸಿಂಹಾಸನದಿ ಮೆರೆಯುವ ಬಯಕೆ ಹುಟ್ಟಿದೆ
ಸಾಮ್ರಾಜ್ಯದ ಒಡೆತನವ ವಶಪಡಿಸಿಕೊಲ್ಲಲೇ ಇಂದೇ
ಮುಕ್ತನಾಗು ಸಾಕಿನ್ನು ಬೇಡ ಈ ಭವನೆಗಳು ನಿನಗೆ
ಪ್ರೀತಿಸು ನನ್ನನು ಹೋಗುವ ಶಾಶ್ವತವಾಗಿ ದೂರದ ತೀರಕೆ
ಸಾಮ್ರಾಜ್ಯದ ಒಡೆತನವ ವಶಪಡಿಸಿಕೊಲ್ಲಲೇ ಇಂದೇ
ಮುಕ್ತನಾಗು ಸಾಕಿನ್ನು ಬೇಡ ಈ ಭವನೆಗಳು ನಿನಗೆ
ಪ್ರೀತಿಸು ನನ್ನನು ಹೋಗುವ ಶಾಶ್ವತವಾಗಿ ದೂರದ ತೀರಕೆ
No comments:
Post a Comment