ಹುಚ್ಚು ಕುದುರೆಯ ಬೆನ್ನತ್ತಿದ ಬದುಕು ನನ್ನದಾಗಿದೆ
ಬಾರದ ಕನಸುಗಳ ಕಟ್ಟಳೆಯ ಕಟ್ಟುತಿಹೆ ಕುಸಿಯುವ ಭಯವಿಲ್ಲ
ಸೋಲೆಂಬ ಶಿಖರವ ಏರುತಿಹೆ ಗೆದ್ದು ಬರುವ ಹಠವಿದೆ
ಸಿಗದ ನಕ್ಷತ್ರಕ್ಕೆ ಕೈ ಚಾಚುವೆ ನಿರಾಶೆಯ ಛಾಯೆಯಿಲ್ಲ
ಪ್ರೀತಿಯ ಸಾಗರಕೆ ಧುಮುಕಿಹೆ ಈಜಿ ಸೇರುವ ಖಾತರಿಯಿದೆ
ಅಲೆಗಳ ರಭಸವ ಲೆಕ್ಕಿಸದೆ ಸಾಗುತಿಹೆ ಭೀತಿಯ ಸುಳಿಯಿಲ್ಲ
ತಂಗಾಳಿ ಬೀಸುವ ವೇಳೆಯಲಿ ಸಂಗಾತಿಯಾ ಹುಡುಕುತಲಿರುವೆ
ಬಿರುಗಾಳಿ ಸುಳಿಯುವ ಸೂಚನೆಯ ಆರ್ಭಟವಿಲ್ಲ
ಕಲ್ಲಾದರೂ ಮನಸ್ಸು ಕಣ್ನೀರಲಿ ಕರಗಿಸುವ ಹೃದಯವಿದೆ
ಕಂಗಳೇ ಬತ್ತಿವೆ ನೋವಿನ ತೀವ್ರತೆಗೆ ಪ್ರೀತಿಯ ನೆಲೆಯಿಲ್ಲ
ಬೊಗಸೆಯಲಿದೆ ಸಾವು ಕ್ಷಣಮಾತ್ರ ಬದುಕುವ ಆಸೆಯಿದೆ
No comments:
Post a Comment