ನೀನಿಲ್ಲದ ಊರು ಸೂರಿಲ್ಲದ ಮನೆ ಒಂಟಿ ಜೀವನ
ಕೇಳಬೇಡ ಪಾಡು ಹುಟ್ಟುತಿದೆ ನೋವು ನಾನೊಂದು ಮಸಣದ ಹೂವು
ಬೆಟ್ಟದ ತುದಿಗಳು ಕಾಯುತಿವೆ,ನೀರಲೆಗಳು ಸ್ವಾಗತಿಸಿವೆ,ಕಾಲ್ದಾರಿಯು ಕರೆಯುತಿದೆ
ಅಲೆಮಾರಿ ಜೀವನ ಸಾಗುತಿದೆ ಎಲ್ಲೆ ಇಲ್ಲದೆ ಕೊನೆಯನ್ನೇ ಕಾಯದೆ
ಮನೆಯಂಗಳದ ಹೂವುಗಳು ನಗುತಲಿವೆ ನನ್ನ ಹುಚ್ಚು ಕಲ್ಪನೆಗೆ
ಸಮಯವ ದೂಷಿಸಿದೆ, ಗಡಿಯಾರವ ದಿಟ್ಟಿಸಿದೆ,ಎಲ್ಲ ಕೆಲಸವ ಬದಿಗಿಟ್ಟು
ಕಾಡುವ ನೆನಪುಗಳ ಮೇಲೆ ಸಿಟ್ಟು ,ಹುಟ್ಟಿದ ಭಾವನೆಗಳಿಗೆ ಕೊಳ್ಳಿ ಇಟ್ಟು
ಕಣ್ಮುಚ್ಚಿ ತಿಲಾಂಜಲಿಯ ಬಿಟ್ಟೆ ಪ್ರೀತಿಯ ಅಂತರಾಳದಿ ಹುದುಗಿಸಿ
ಒಬ್ಬಳೇ ನಡುಗಿ ಬೆವರಿದೆ, ಪ್ರತಿ ಕ್ಷಣವೂ ಸತ್ತು ಬದುಕುತ್ತಿರುವೆ
ನಮ್ಮಿಬ್ಬರ ದೂರ ಮಾಡಿ ಕಾಲವು ಕಟ್ಟಿಹುದು ಭದ್ರಕೋಟೆ
No comments:
Post a Comment