Friday, June 22, 2012

ನಿನ್ನ ಮರೆಯಲೇ ?????



ಗೆಳೆಯ ನಿನ್ನ ಮರೆಯಲು ನಾನೇನೋ ಮಾಡಿದೆ 
ಸಾಧ್ಯವಾಗದೆ ಹೋಯಿತು ಎಲ್ಲೇಲ್ಲೂ ನೀ ಕಾಡಿದೆ 
ಮರೆಯದೆ  ಅಳಿಯದೆ ಉಳಿಯದೆ ಏನನ್ನೂ ಅರಿಯದೆ
ಅಚ್ಚು ಮೂಡಿದೆ ಹೃದಯದಿ ನಿನ್ನ ಹೆಸರು ಮಾಸದೆ 

ತಂಗಾಳಿಯಲಿ ತೇಲಿ ಬಂದೆ ಮುಂಜಾವಿನಲಿ ಮೂಡಿ ಬಂದೆ 
ಇಬ್ಬನಿಯ ಹನಿಯು ನೀನಾದೆ ಸುಮದ ಸುವಾಸನೆಯು ನೀನಾದೆ 
ಚಿಗುರೆಲೆಯ ಹಸಿರು ನೀನಾದೆ ಮೂಡಣದ ಸೂರ್ಯ ನೀನಾದೆ 
ಮೋಡಗಳ ಸಾಲು ನೀನಾದೆ ಉದುರುವ ಹನಿಗಳು ನೀನಾದೆ 

ಸೂರ್ಯಕಾಂತಿಯ ನಾಚಿಸಿದೆ ಮೋಡಗಳ ತಡೆದು ನೀರಾಗಿಸಿದೆ 
ಕಂಗಳಲಿ ಹೊಸ ಕಾಂತಿಯ ಮೊಗದಲಿ ನವ ಚೈತನ್ಯವ ತಂದೆ
ಮರೆ ಎಂದರೆ ಹೇಗೆ ಮರೆಯಲಿ ಬಯಕೆಯ ಹುಟ್ಟು ನೀನೇಕೆ ಹಾಕಿದೆ
ಆಸೆಯ ಅಲೆಗಳ  ಒಲವಿನ ಸಾಗರಕೆ ನನ್ನನೇಕೆ ನೂಕಿದೆ

 
ಈಜಿ ಬರುವ ಧೈರ್ಯವಿಲ್ಲ ಸಾವು ಒಂದೇ ಕೊನೆ ದಾರಿಯಾಗಿದೆ 
ಇನ್ನಾದರೂ ತೊರೆದು ಹೋಗು ನನ್ನನು ಉಳಿಸು ನನ್ನ ಹೀಗೆ ಕೊಲ್ಲದೆ 
ಬೇಡಿಕೆಯ ಇಡಲಾರೆ ನಿನ್ನ ಮುಂದೆ ನಾನಾ ದಾರಿ ನನಗಾಗಿ ಕಾದಿದೆ
ಹೋಗುವ ಮುನ್ನ ಮರೆಯಲೇ ನಿನ್ನ ಕಣ್ಣೀರು  ಬತ್ತದೆ ಉಳಿದಿದೆ

No comments:

Post a Comment