Monday, May 28, 2012

ನಿನ್ನ ನೆನಪು



ಮುಸುಕಿನ ಮಬ್ಬನು ತೆರೆಯುವ ವೇಳೆಯಲಿ
ಮಾಘ ಮಾಸದ ಕೊರೆಯುವ  ಚಳಿಯಲಿ
ಇಬ್ಬನಿಯ ಹನಿಯು ತೊಟ್ಟಿಕ್ಕುವ ಸಮಯದಲಿ
ನಿನ್ನ ನೆನೆಯುವೆ ಸಂಕೋಚದಿ ಮನದಲಿ

ಸೂರ್ಯ ರಶ್ಮಿಯ ಕಾಣುವೆ ತವಕದಲಿ
ಹಕ್ಕಿಗಳ ಕಲರವವ ಕೇಳುವೆ ಇಂಪಿನಲಿ
ಜಿನುಗುವ ಮಳೆಯ ಚಿಟಪಟ ಸದ್ದಿನಲಿ
ಹುಡುಕುವೆ ನಿನ್ನ ಹನಿಗಳ ಪ್ರತಿ ಸಾಲಿನಲಿ

ದೂರದಿ ಕಾಣುವ ಬೆಟ್ಟಗಳ ದಟ್ತತೆಯಲಿ
ಹೊಮ್ಮರಗಳ ಹಸುರಿನ ಬೆಡಗಿನ ಬಿನ್ನಾನದಲಿ
ಬೀಸಿ ಕರೆಯುವ ತಂಗಾಳಿಯ ತೋಳಿನಲಿ
ಬಯಸಿದೆ ನಿನ್ನ ಪ್ರೀತಿಯ ಸವಿಯ ಹೃದಯದಲಿ

No comments:

Post a Comment