ಉತ್ತರ ನೀಡುವೆಯಾ ನನ್ನ ಪ್ರಶ್ನೆಗೆ ಮಾಡಿದ ತಪ್ಪೇನು ನಾನು
ಸತ್ತರೂ ನೆನೆಯುವೆ ನಿನ್ನ ಎಂಬ ಭರವಸೆಯ ಮಾತೆಲ್ಲಿ ಇನ್ನು
ಕೂಡಿ ಕಳೆದ ಕ್ಷಣಗಳ ಮರೆತೆಯ ಅಸ್ಟು ಬೇಗ
ಮರೆಯಲು ಕೂಡ ನೆನಪಿನ ಬುತ್ತಿಯ ಬಿಚ್ಚಬೇಕು ಈಗ
ಏಕಿಂತಹ ಶಿಕ್ಷೆ ಈ ಜೀವಕೆ ಹೊರೆ ಭಾರದ ಕಷ್ಟಗಳು ಮನಕೆ
ಕೊನೆಯಾಗಿಸು ವೇದನೆಯ ಸಾಗುತ ದೂರದ ಸಾಗರದ ತೀರಕೆ
ಅಲೆಗಳ ಅಬ್ಬರದಿ ಮರುಕಳಿಸಿ ಬರುತಿವೆ ನಿನ್ನ ನೆನಪುಗಳು
ತೇಲಿ ಹೋಗುತಿವೆ ಕಣ್ಣಂಚಲಿ ಹನಿಗಳ ಮುತ್ತಿನ ಸಾಲುಗಳು
ಧುಮಿಕ್ಕಿ ಹರಿಯುತಿದೆ ನೋವಿನ ಜಲಧಾರೆ
ಎಕಿಂಥಹ ಕಠಿಣತೆ ನಿನ್ನಲಿ ನಾನಿಂದು ಸಹಿಸಲಾದೆ
ಜೋತೆಗಿರುವೆನೆಂದು ಇತ್ತ ಭಾಷೆ ನೆನಪಾಗದೆ ನಿನಗೆ
ಅಸ್ಟು ದಿನಗಳ ದಿನಗಳ ಒಡನಾಟ ಮರೆತು ಬದುಕುವೆಯಾ ಹೀಗೆ
ನನಗಿರಲಿ ಗೆಳೆಯ ಎಲ್ಲ ಕಹಿ ಅನುಭವಗಳ ಉಪಟಳ
ಹರಸುವೆ ನಿನ್ನ ಬದುಕು ಬಂಗಾರವಾಗುವ ದಿನಗಳ
ದೂರವಿದ್ದರೂ ಸಾಮೀಪ್ಯದ ಸುಮಧುರತೆ ಸೂಸುತಿದೆ ಹತ್ತಿರ
ನನ್ನ ನಿನ್ನ ಸ್ನೇಹಕ್ಕೆ ಹರಿಯುವ ಕಣ್ಣ ಹನಿಗಳೇ ಆಧಾರ
No comments:
Post a Comment